Total Pageviews

Saturday, July 1, 2017

ಗಾಂಧಿಯ ಸಂಕೀರ್ಣ ವ್ಯಕ್ತಿತ್ವ ಅನಾವರಣ

ಕವಿ, ಕಥೆಗಾರ, ನಾಟಕಕಾರ, ಪ್ರಬಂಧಕಾರ, ಅನುವಾದಕ, ಸಂಶೋಧಕ ಮತ್ತು ವಿಮರ್ಶಕರಾದ ಡಾ. ರಾಜಶೇಖರ ಮಠಪತಿ (ರಾಗಂ) ರವರು ಸಮಕಾಲೀನ ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಅವರು ತಮಗೆ ದಕ್ಕಿದ ವಿಶಿಷ್ಟ ಜೀವನಾನುಭವಗಳನ್ನು ಕಳೆದ ಎರಡು ದಶಕಗಳಿಂದ ಬರಹಕ್ಕಿಳಿಸುತ್ತ ಬಂದವರು. ಯಾವ ಭ್ರಮೆಯೂ ಇಲ್ಲದಂತೆ ಅನಿಸಿದ್ದನ್ನು ನೇರವಾಗಿ ಬರೆದು ಕೈ ಬೀಸಿ ಮುಂದೆ ಹೋಗುವ ರಾಗಂವರ ಬರವಣಿಗೆ ಆಶ್ಚರ್ಯ ಹುಟ್ಟಿಸುವಂಥದ್ದು. ಡಾ. ರಾಗಂ ಉತ್ಸಾಹಿಗಳು, ಸ್ನೇಹಪರರು, ಜನಪರ-ಜೀವಪರ ಮೌಲ್ಯಗಳ ಬಗೆಗೆ ಅಧಿಕ ಕಾಳಜಿ ಉಳ್ಳವರು, ಅನುಭವಗಳ ಶೋಧಕರು ಮತ್ತು ಬರವಣಿಗೆಯಲ್ಲಿ ಗಾಢ ಶ್ರದ್ಧೆ ಉಳ್ಳವರು. ಅವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಪರಿಣತಿ ಪಡೆದವರುಅವರದು ಹರಿತವಾದ ವಿಶಿಷ್ಟ ಬರವಣಿಗೆ ಮತ್ತು ಮೂರ್ತವಾದ ಭಾಷೆ. ಅವರು ಎತ್ತಿರುವ ಪ್ರಶ್ನೆಗಳು, ಪ್ರತಿಪಾದಿಸಿದ ವಿಚಾರಗಳು ಗಂಭೀರ ಚರ್ಚೆಯನ್ನು ಅಪೇಕ್ಷಿಸುವಂಥವು.

ಪ್ರಸ್ತುತಗಾಂಧಿ ಮುಗಿಯದ ಅಧ್ಯಾಯಡಾ.ರಾಜಶೇಖರ ಮಠಪತಿಯವರು ರಚಿಸಿದ ಕೃತಿಯಲ್ಲಿ ಮಹಾತ್ಮ ಗಾಂಧೀಜಿಯ ವ್ಯಕ್ತಿತ್ವದ ಕುರಿತು ಹಲವು ರೋಚಕ ಸಂಗತಿಗಳಿವೆ. ಕೃತಿ ಮೂವತ್ನಾಲ್ಕು  ಲೇಖನಗಳನ್ನು ಒಳಗೊಂಡಿದೆ. ಮಹಾತ್ಮ ಗಾಂಧೀಜಿ ಕುರಿತು ಇಲ್ಲಿಯವರೆಗೆ ಕಂಡು ಕೇಳರಿಯದ ಹಲವು ಸಂಗತಿಗಳಲ್ಲದೆ, ಅವರನಿಜಜೀವನದ ಹತ್ತು ಹಲವು ಸಂಗತಿಗಳ ಕುರಿತು ಕೃತಿ ಬೆಳಕು ಚೆಲ್ಲುತ್ತದೆ. ಕೃತಿಯ ಮೂಲಕನಿಜವಾದ ಗಾಂಧಿಯ ವ್ಯಕ್ತಿತ್ವವನ್ನು ಡಾ.ರಾಗಂ ಸಮರ್ಥವಾಗಿ ಅನಾವರಣಗೊಳಿಸಿದ್ದಾರೆ. ಮಹಾತ್ಮ ಗಾಂಧೀಜಿ ದೇಶ-ವಿದೇಶಗಳಲ್ಲಿ ಖ್ಯಾತನಾಮರು. ಅವರ ಅಹಿಂಸಾ ತತ್ವ, ನಿಸ್ವಾರ್ಥ ಸೇವೆ, ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಅವರ ಪರಾಕ್ರಮ ಎಲ್ಲವೂ ತಿಳಿದಿರುವಂಥದ್ದೆಯಾಗಿದೆ. ಆದರೆ ಒಬ್ಬ ವ್ಯಕ್ತಿಯಾಗಿ ಗಾಂಧೀಜಿ ಈಗಲೂ ಅಪರಿಚಿತರೇ ಎಂದು ಹೇಳುವ ಲೇಖಕರು ಅಪರಿಚಿತ ಮುಖಗಳನ್ನು ಇಲ್ಲಿ ಸವಿವರವಾಗಿ ಪರಿಚಯಿಸಿದ್ದಾರೆ. ಗಾಂಧೀಜಿ ಅವರಲ್ಲಿ ಕೂಡ ಮಾನವ ಸಹಜ ಕೆಲವು ದೌರ್ಬಲ್ಯಗಳಿದ್ದವು ಎಂಬ ಸಂಗತಿಗಳನ್ನು ಕೃತಿ  ಹೊರಹಾಕಿದೆ.
ಯುಗದ ಯುಗಪ್ರವರ್ತಕ, ಶಾಂತಿಧೂತ, ಮಹಾ ಮಾನವತಾವಾದಿ, ಸತ್ಯ, ಶಾಂತಿ, ಅಹಿಂಸೆಯನ್ನು ತನ್ನ ಬದುಕಿನಲ್ಲಿ ಮೈಗೂಡಿಸಿಕೊಂಡು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪ್ರಭಾವಿ ಜನನಾಯಕನಾಗಿ, ಮಹಾತ್ಮನಾಗಿ, ರಾಷ್ಟ್ರಪಿತನಾಗಿ ಮಾನವತೆಗಾಗಿ ಮಿಡಿದ ಮನ. ಅಹಿಂಸಾವಾದಿರಕ್ತರಹಿತ ಕ್ರಾಂತಿಧೂತ, ಶಾಂತಿಯ ಹರಿಕಾರ ಇಂತಹ ಮಹಾನ್ ವ್ಯಕ್ತಿಯ ವ್ಯಕ್ತಿತ್ವದ ಕುರಿತು ಸಂಕ್ಷಿಪ್ತವಾಗಿ ಬರೆಯುವುದಾಗಲಿ, ಹೇಳುವುದಾಗಲಿ ತುಂಬಾ ಪ್ರಯಾಸದ ಕೆಲಸ. ‘ಬೊಗಸೆಯಿಂದ ಸಮುದ್ರದ ನೀರನ್ನು ಎತ್ತಿಕೊಂಡು ಇದು ಸಮುದ್ರವೆಂದು ತೋರಿಸಿದಂತೆ’. ಕುಟುಂಬ ಸದಸ್ಯರು, ಹೆಂಡತಿ, ಮಕ್ಕಳು, ಮಹಿಳೆಯರು, ಸಹವರ್ತಿ ಯುವತಿಯರು, ರಾಜಕೀಯ ಮತ್ತು ರಾಜಕೀಯೇತರ ವ್ಯಕ್ತಿಗಳೊಂದಿಗೆ ಗಾಂಧೀಜಿಯವರು ಹೊಂದಿದ್ದ ಸಂಬಂಧಗಳನ್ನು ಕೃತಿ ಎಳೆ ಎಳೆಯಾಗಿ ಬಿಡಿಸಿ ಇಡುವ ಮೂಲಕ ಒಬ್ಬ ಸಾಮಾನ್ಯ ವ್ಯಕ್ತಿಯ ರೂಪದಲ್ಲಿ ಗಾಂಧಿಯನ್ನು ವಿವರವಾಗಿ ಪರಿಚಯಿಸಲಾಗಿದೆ. ಗಾಂಧೀಜಿ ರಾಜಕೀಯ ನಾಯಕರೇ ಅಥವಾ ಸನ್ಯಾಸಿಯೇ.....? ಎರಡೂ ಆಗಿದ್ದರೆ ಎರಡನ್ನೂ ಹೇಗೆ ಜೀವನದಲ್ಲಿ ಮೇಳೈಸಿಕೊಂಡಿದ್ದರು? ಹೀಗೆ ಹಲವಾರು ಪ್ರಶ್ನೆಗಳಿಗೆ ಡಾ.ರಾಗಂ ತಮ್ಮದೇ ಧಾಟಿಯಲ್ಲಿ ಉತ್ತರ ನೀಡುತ್ತಾ ಹೋಗುತ್ತಾರೆ. ಆಪ್ತಧಾಟಿಯ ಸಮತೋಲನದ ಬರವಣಿಗೆ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಗಾಂಧಿಯ ಬದುಕನ್ನು ಪ್ರಾಮಾಣಿಕವಾಗಿ ನಿರೂಪಿಸುವ ರೀತಿಯಲ್ಲಿ ರಾಗಂವರದೇ ಆದ ಒಂದು ವಿಶಿಷ್ಟ ದೃಷ್ಟಿಕೋನವಿರುವುದು ಕೃತಿಯ ಹೆಗ್ಗಳಿಕೆ. ಲೇಖಕರ ಸೂಕ್ಷ್ಮಗ್ರಹಿಕೆ, ವಿಶ್ಲೇಷಣ ಶಕ್ತಿ ಮತ್ತು ಅಭಿವ್ಯಕ್ತಿ ಸ್ಪಷ್ಟತೆ ಅಗಾಧವಾದದ್ದು. ಕೃತಿಯುದ್ದಕ್ಕೂ ಅವರು ಗಾಂಧಿ ಬದುಕಿನ ವೈರುಧ್ಯ ಮತ್ತುಗಾಂಧಿವಾದವನ್ನು ಕಟುಟೀಕೆಗೆ ಒಳಪಡಿಸಿದ್ದಾರೆ.
ಜಗತ್ತಿನ ಮಾನವ ಸಮುದಾಯ ಹಿಂಸೆ, ಅಶಾಂತಿ, ಅಪನಂಬಿಕೆ, ಅಸಹನೆ, ದ್ವೇಷ, ಅನ್ಯಾಯ, ಅಕ್ರಮಗಳಿಂದ ತತ್ತರಿಸುತ್ತ ಅವುಗಳ ಮಡಿಲಿನಲ್ಲಿ ಮಲಗಿದ್ದಾಗ ಎಚ್ಚರಗೊಂಡು ಜಗತ್ತಿಗೆ ಶಾಂತಿ, ಸಹನೆ, ಸಹಬಾಳ್ವೆ, ಅಹಿಂಸಾ ಪಾಠ ಕಲಿಸಿದವ ಮತ್ತು ಪ್ರಪಂಚದಲ್ಲಿಯೇ ಪ್ರಪ್ರಥಮವಾಗಿ ಮಾನವ ಕುಲ ನಾಶ ಮಾಡುವ ಪರಮಾಣು ಅಸ್ತ್ರಗಳನ್ನು ಬಳಸದೆಅಹಿಂಸಾಎಂಬ ಶಾಂತಿಯ ಬ್ರಹ್ಮಾಸ್ತ್ರವನ್ನು ಬಳಸಿ ಭಾರತಕ್ಕೆ ಸ್ವಾತಂತ್ರ್ಯ ಕಲ್ಪಿಸಿದ ಧೀಮಂತ ನಾಯಕರಾದ ಗಾಂಧೀಜಿಯವರ ಬದುಕೇ ಒಂದು ಮಹಾನ್ ಸಂದೇಶ. ‘ಸತ್ಯದ ಗುರಿ ತಲುಪಲು ಅಹಿಂಸೆಯು ಒಂದು ಶ್ರೇಷ್ಠ ಮಾಧ್ಯಮ. ಆದ್ದರಿಂದ ಸತ್ಯಾನ್ವೇಷಕರು ಅಹಿಂಸೆಯನ್ನು ಪಾಲಿಸುವುದು ಅವಶ್ಯಕವಾಗಿದೆ. ಅಹಿಂಸೆಯು ಹೆದರುಪುಕ್ಕರ ಅಸ್ತ್ರವಲ್ಲ. ಶೂರರು ಮತ್ತು ಮನೋಸ್ಥೈರ್ಯವಿದ್ದವರು ಮಾತ್ರವೇ ಅಹಿಂಸೆಯ ಅಸ್ತ್ರವನ್ನು ಬಳಸಬಲ್ಲರುಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಸಾಹಸಿಗ ಗಾಂಧಿ. ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮಾನವ ಜಗತ್ತು ಕಂಡ ಶ್ರೇಷ್ಠ ಚಿಂತಕ, ದಾರ್ಶನಿಕ, ನುಡಿದಂತೆ ನಡೆದು ವಿಶ್ವಕ್ಕೆ ಆದರ್ಶ ಪ್ರಾಯರಾದ ಅಪರೂಪದ ಸಂತ. ಅವರ ವ್ಯಕ್ತಿ ವಿಚಾರಗಳು ಮನುಕುಲ ಇರುವವರೆಗೆ ಪ್ರಸ್ತುತ. ಅವರ ವಿಚಾರಗಳು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ ಹಾಗೂ ಅವಶ್ಯಕವಾಗಿವೆ. ಗಾಂಧೀಜಿಯವರ ಬದುಕು ಹಾಗೂ ಸಾಧನೆ ಕುರಿತು ವಿಶೇóಷವಾದ ಕೃತಿ ಮಹಾತ್ಮನನ್ನು ಸ್ಮರಿಸುವುದರ ಜೊತೆಗೆ ಅವರು ಹಾಕಿಕೊಟ್ಟ ವಿಚಾರ, ಸಂದೇಶಗಳನ್ನು ಇಂದು ಜನತೆಗೆ ತಲುಪಿಸಲು ಅಗತ್ಯವಾದ ಬರಹ, ಚಿತ್ರಗಳನ್ನು ಒಳಗೊಂಡಿದೆ.
ನನ್ನ ನಾಡೆಂಬುದೇನು?’, ‘ನಾನು ಜ್ಯೋತಿಷಿಯಲ್ಲ,’ ‘ಕತ್ತು ಕೊಯ್ಯುವವರ ಕೈಗೆ ಹೂ,’ ‘ಸೀಮಿತರಿಗೆ ಸೀಮಾತೀತ’, ‘ನನ್ನನ್ನು ಕೊಂದುಬಿಡು’, ‘ಸಾಮರಸ್ಯದ ಚಿಂತೆಯೆ ನನ್ನ ಚಿತೆ’,  ‘ನನ್ನನ್ನು ದೇವರಾಗಿಸಬೇಡಿ’, ‘ನನ್ನದು ಅರಣ್ಯರೋದನ’, ‘ಲಾಹೋರಿಗೆ ಹೋಗಲು ಬಿಡು’, ‘ರೂಪ ರೂಪಗಳನು ದಾಟಿ’, ‘ಸೈತಾನನ್ನು ತಬ್ಬಿ, ದೇವರನ್ನು ಹೊರದಬ್ಬಿ’, ‘ಸೇಡು ಮನುಷ್ಯನಿಗೊಪ್ಪುವ ಭಾಷೆಯೇ?’, ‘ಮಾತುಗಳೆಲ್ಲಾ ಮಾರ್ಗವಾಗಿದ್ದರೆ’, ‘ಇಷ್ಟರಲ್ಲೇ ದೇವರು ಕರೆಯಿಸಿಕೊಳ್ಳುತ್ತಾನೆ’, ‘ನಾನು ರಾಷ್ಟ್ರಪಿತನೇ?,’ ‘ಗಾಂಧಿ ಎಂಬ ಜೂಜುಕೋರ’, ‘ಹಿಂದೂಯಿಸಂ ಎಂದರೇನು?’, ‘ಸಬ್ಕೊ ಸನ್ಮತಿ ದೇ ಭಗವಾನ್’, ‘ಬಾಈಗ ನನ್ನೊಂದಿಗಿರಬೇಕಿತ್ತು’, ‘ಸಹನೆಯೋ, ಷಂಡತನವೋ?,’ ‘ರಾಮ, ರಹೀಮ, ರೆಹಮಾನ’, ‘ಮರಣ ಮಾಸದ ಮೊದಲ ದಿನ’, ‘ಇನ್ನೆಷ್ಟು ದಿನ ಬದುಕು’, ‘ನಾನೇ ರಾಷ್ಟ್ರವಲ್ಲ’, ‘ಬಾಂಬು ಇಟ್ಟವನೂ ಭಗವಂತನೇ?,’ ‘ಉರಿಗೆ ತೆರೆಯಿಲ್ಲ’- ಮೊದಲಾದ ಲೇಖನಗಳಲ್ಲಿ ಗಾಂಧೀಜಿಯ ಸಂಕೀರ್ಣ ವ್ಯಕ್ತಿತ್ವ ಅನಾವರಣಗೊಂಡಿದೆ. ಗಾಂಧೀಜಿಯವರ ಬಹುಮುಖಿ ಚಿಂತನೆ, ಕ್ರಿಯೆಯ ಸ್ವರೂಪ, ಜೀವನಶೈಲಿಗಳ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದೆ. ಅಂದರೆ ಗಾಂಧೀಜಿಯ ಬದುಕಿನ ಕೆಲವು ಪುಟಗಳನ್ನಷ್ಟೇ ಓದಿದರೂ ಅವರ ಸಮಗ್ರ ಬದುಕಿನ ಸ್ಥೂಲಚಿತ್ರವೊಂದು ರೂಪಗೊಳ್ಳುವಂಥ ರಚನಾವಿನ್ಯಾಸ ಇಲ್ಲಿ ಕಾಣುತ್ತದೆ. ಅಷ್ಟೇ ಅಲ್ಲದೆ ಗಾಂಧೀಜಿ ವ್ಯಕ್ತಿತ್ವ, ಚಿಂತನೆ ಮತ್ತು ಕ್ರಿಯೆಗಳನ್ನು ಏಕಮುಖವಾಗಿ ವೈಭವೀಕರಿಸದೆ ಒಂದು ಐತಿಹಾಸಿಕ ಸಂದರ್ಭದಲ್ಲಿ ಇಟ್ಟುನೋಡುವಂತಹ ಮತ್ತು ಸಹಚರರ, ಜನಸಾಮಾನ್ಯರ ಕಣ್ಣುಗಳ ಮೂಲಕವೂ ನೋಡುವಂತಹ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಹೀಗಾಗಿ ಗಾಂಧಿ ಪರಿಚಯ, ಶೋಧನೆ, ವಿಮರ್ಶೆ ಇಲ್ಲಿ ಏಕಕಾಲದಲ್ಲಿ ಸಾಧ್ಯವಾಗಿದೆ. ಗಾಂಧಿಯನ್ನು ಸಾಕ್ಷಿಯಾಗಿಟ್ಟುಕೊಂಡು ಸ್ವಾತಂತ್ರ್ಯ ಪೂರ್ವದ ಒಂದು ಪ್ರಮುಖ ಘಟ್ಟವನ್ನೂ ಅರ್ಥಮಾಡಿಕೊಳ್ಳಬಯಸುವ ಮಹತ್ವಾಕಾಂಕ್ಷೆ ಪ್ರಯತ್ನ ಇಲ್ಲಿ ಎದ್ದು ಕಾಣುತ್ತದೆ. “ ಭೂಮಿಯಲ್ಲಿ ನಶಿಸಿ ಹೋಗುವಂತಹ ಸಾಮ್ರಾಜ್ಯದ ಬಗ್ಗೆ ನನಗೆ ಯಾವ ಬಯಕೆಯೂ ಇಲ್ಲ. ಜೀವಿಸುವ ಪ್ರತಿಯೊಂದರಲ್ಲಿಯೂ ನನ್ನನ್ನು ನಾನೇ ಕಾಣಲು ಬಯಸುತ್ತೇನೆಎಂದು ಹೇಳಿದ ಗಾಂಧಿಯ ಮಾತನ್ನು ಸ್ವಾತಂತ್ರ್ಯೋತ್ತರದ ಭಾರತ ಸರಿಯಾಗಿ ಗ್ರಹಿಸದಿರುವುದು ಬಹು ದೊಡ್ಡ ದುರಂತ. ಗಾಂಧೀಜಿ ಭಾರತಕ್ಕೆ ಮಾತ್ರ ತಂದೆ ಅಲ್ಲ, ಆತ ಜಗತ್ತಿಗೆ ತಂದೆ. ಸತ್ಯ, ಶಾಂತಿ ಮತ್ತು ಅಹಿಂಸೆಗಳ ಅಪರಿಮಿತ ಸಾಮಥ್ರ್ಯವನ್ನು ಅವರು ಇಡೀ ಜಗತ್ತಿಗೆ ದರ್ಶನ ಮಾಡಿಸಿದ ಹೋರಾಟಗಾರರು.
     ಗಾಂಧೀಜಿ ಯಾವುದೇ ನಿಶ್ಚಿತ ಸಿದ್ಧಾಂತಕ್ಕೆ ಬದ್ಧರಾಗದೆ ಚಿಂತನೆ ಮತ್ತು ಕ್ರಿಯೆಗಳಲ್ಲಿ ಸತತ ಪ್ರಯೋಗಗಳನ್ನು ನಡೆಸುತ್ತ ತನ್ನದುಸತ್ಯ ಶೋಧನೆಎಂಬ ತತ್ವಕ್ಕೆ ಅಂಟಿಕೊಂಡಿದ್ದರಲ್ಲದೇ ಮಾನವ ಹೃದಯದಾಳವನ್ನು ಹೊಕ್ಕಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಸಾಂಸ್ಕøತಿಕ, ವೈದ್ಯಕೀಯಮುಂತಾದ ಕ್ಷೇತ್ರಗಳಲ್ಲೆಲ್ಲಾ ಆಳವಾಗಿ ಬಗೆದು ನೋಡಿದ ಗಾರುಡಿಗರಾಗಿದ್ದರೆಂಬುದಕ್ಕೆ ಡಾ. ರಾಗಂವರ ಕೃತಿಯೇ ಸಾಕ್ಷಿ. ನಾವು ಗಾಂಧೀಜಿಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳದೇ ಅವರ ವಿಚಾರಧಾರೆಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ ಸಾಧ್ಯ. ಇಂದು ಗಾಂಧಿಯ ಹೆಸರು - ತತ್ವದ ಮೇಲೆ ಕದ್ದು ಬಸಿರಾಗುವ ರಾವಣಾಸುರರು  ಹೆಚ್ಚಾಗುತ್ತಿದ್ದಾರೆ. ಹಸಿರು ಗಾಂಧಿಯ ಕಂಡು ನಿಟ್ಟುಸಿರು ಬಿಡುವವರೆಲ್ಲ ಹೊಸ ಗಾಂಧಿ ಬೇಕೆಂಬ ಧರಣಿ ಮುಷ್ಕರ ನಿತ್ಯ ನಡೆಸುತ್ತ ಭಾಷಣದ ಗಾಂಧಿ ಬೇಕು; ಕುಡಿಯೋ ಗಾಂಧಿ ಬೇಕು, ಕುಣಿಯೋ ಗಾಂಧಿ ಬೇಕು, ಜಗದ ಸೊಗಸನ್ನೆಲ್ಲ ಹೀರಿ ಹಾರಾಡುವ ನವ ಗಾಂಧಿ ಬೇಕೆಂದು ಕೇಳುತ್ತಿರುವಾಗಧರ್ಮಸಾರವನ್ನು ಮೀರಿ ಬೆಳೆದ ಮಹಾತ್ಮ ಗಾಂಧೀಜಿ ವ್ಯಕ್ತಿತ್ವವನ್ನು ರಾಗಂವರು ಕೃತಿಯಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ಮೇಲ್ನೋಟಕ್ಕೆ ಜೀವನ ಚರಿತ್ರೆಯಾದರೂ ಒಂದು ಆತ್ಮಕಥೆಯಂತೆ, ಕಾದಂಬರಿಯಂತೆ ಕೃತಿ ತೀವ್ರ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ ಮತ್ತು ಚಿಂತನೆಗೆ ಪ್ರೇರೇಪಿಸುತ್ತದೆ. ಸಂತ, ರಾಷ್ಟ್ರಪಿತ, ಮಹಾತ್ಮ ಗಾಂಧೀಜಿಯ ಸಂಕೀರ್ಣ ವ್ಯಕ್ತಿತ್ವಕ್ಕೆ ಕೃತಿ ಕನ್ನಡಿ ಹಿಡಿದಿರುವುದು ಸತ್ಯ. “ಗಾಂಧಿ ಗಾಢಾಂಧಾಕಾರದ ಭರತಭೂಮಿಯ ಸಂದಿಗೊಂದಿಯಲಿ ಸೂರ್ಯನ ಬೆಳಕು ತರದಿದ್ದರೂ ಚಂದಿರನ ಬೆಳಕು ತರಲು ತಡಕಾಡಿದವನು. ಬ್ರಿಟಿಷರ ಬೂಟುಗಳ ತುಳಿತಕ್ಕೆ ಮೈ ಕೊಟ್ಟರೂ ಹ್ಯಾಟುಗಳ ಆಟಕ್ಕೆ ಗೂಟ ಬಡಿದವನು, ಲಾಠಿ ಬಂದೂಕಗಳ ಮೀಟಿ ನಿಂತವನು, ಕೋಟಿ ಕನಸುಗಳ ಭಾರತವ ಕಟ್ಟಿದವನು. ಥೇಟು ಹುಚ್ಚನ ಹಾಗೆ ಅಂಗಿಯಿಲ್ಲದೇ ಬರಿಮೈ ಮೆರೆದುಕೊಂಡು ಬಯಲಾದ ಬೈರಾಗಿ; ಸತ್ಯ ಅಹಿಂಸೆಗಳ ಸಾಕ್ಷಿಯಾಗಿ ತಪಗೈದ ಯೋಗಿ. ಖಾದಿಗೊಂದು ಮೌಲ್ಯ ತಂದುಕೊಟ್ಟವನು, ಗಾದಿ ಏರದೇ ಗಾವುದ ಗಾವುದ ದೂರ ನಿಂತವನು, ರಾಟಿಯ ಮೇಲೊಂದು ಕೋಟಿ ಉದ್ಯೋಗ ಚಕ್ರ ತಿರುಗಿಸಿದವನು, ಬತ್ತಲಾದ ಭಾರತದ ಬಯಲಿಗೊಂದು ಬಟ್ಟೆ ತೊಡಿಸಿದವನು. ಗಾಂಧೀಜಿ ರಸಿಕರಾಗಿದ್ದರು, ಮಹಿಳೆಯರೊಂದಿಗೆಆತ್ಮೀಯಸಂಬಂಧ ಹೊಂದಿದ್ದರು, ಮಹಾತ್ಮ ಸೌಂದರ್ಯ ಆರಾಧಕರಾಗಿದ್ದರು, ದೇಶದ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ದೇಶದ ಜನತೆಗೆ ಆಯಸ್ಕಾತದಂತಹ ಆಕರ್ಷಕ ವ್ಯಕ್ತಿತ್ವ ಹೊಂದಿದ್ದರು, ವೈಜ್ಞಾನಿಕ ಚಿಂತನೆಗಳನ್ನು ಜೊತೆಯಲ್ಲಿಟ್ಟುಕೊಂಡು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿಯೇ ಸಮಾಜಮುಖಿ ಚಿಂತಕರಾಗಿದ್ದರು, ಬ್ರಿಟಿಷರ ಸಾಮ್ರಾಜ್ಯಶಾಹಿ ಆಡಳಿತವನ್ನು ಅಹಿಂಸಾ ಮಾರ್ಗದಿಂದ ವಿರೋಧಿಸಿದ್ದರು, ಸತ್ಯಾಗ್ರಹ ಪರಿಕಲ್ಪನೆ ಇಡೀ ಜಗತ್ತಿಗೆ ಯುದ್ಧದಂತಹ ರಕ್ತಪಾತದ ಮಾರ್ಗದ ಹೊರತಾಗಿ ಸ್ವಾತಂತ್ರ್ಯ ಪಡೆಯುವ ಮಾರ್ಗ ತೆರೆದಿಟ್ಟರು.......”- ಹೀಗೆ ಮೊದಲಾದ ಪ್ರಮುಖ ವಿಷಯಗಳನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಜಗತ್ತಿನಲ್ಲಿಯೇ ಪ್ರಪ್ರಥಮ ಬಾರಿಗೆ ಪರಮಾಣು ಅಸ್ತ್ರಗಳ ಬದಲಾಗಿಅಹಿಂಸಾಎಂಬ ಬ್ರಹ್ಮಾಸ್ತ್ರವನ್ನು ಬಳಸಿ ಇಡೀ ವಿಶ್ವಕ್ಕೆ ಮಾದರಿಯಾಗಿ ಅಹಿಂಸೆ, ಶಾಂತಿ, ಸಹನೆ,ಸಹಬಾಳ್ವೆಯ ತತ್ವದ ಸಂದೇಶವನ್ನು ನೀಡಿದ್ದಾರೆ. ಬ್ರಹ್ಮಾಸ್ತ್ರವು ಇಂದಿನ ಕ್ರೂರ ಹತ್ಯೆ, ಹೋರಾಟ, ಆಕ್ರಮಣ, ಭಯೋತ್ಪದನೆಗಳಿಂದ ಇಡೀ ಜಗತ್ತು ತತ್ತರಿಸಿ ಮಾನವ ಸಂಕುಲದ ನೆಮ್ಮದಿ ಹಾಳಾಗುತ್ತಿದೆ. ಇವುಗಳನ್ನು ಹತ್ತಿಕ್ಕಿ ನಮ್ಮಲ್ಲಿ ಇಂದು ಶಾಂತಿಯ ವಾತಾವರಣ ಮೂಡಿಸಬೇಕಾದರೆ ವ್ಯಕ್ತಿ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿಅಹಿಂಸಾಅಸ್ತ್ರದ ಪರಿಪಾಲನೆಯಾಗಬೇಕು. ಹಿನ್ನೆಲೆಯಲ್ಲಿಯೇ ನಾವೆಲ್ಲ ವಿಚಾರಿಸಿದರೆ ಡಾ. ರಾಗಂವರಗಾಂಧಿ ಮುಗಿಯದ ಅಧ್ಯಾಯಕೃತಿ ಗಾಂಧೀಜಿಯನ್ನು ಸರಿಯಾಗಿ ಅರಿಯಬೇಕಾದವರಿಗೆ ಇದೊಂದು ಮಾರ್ಗದರ್ಶಿಯಗುತ್ತದೆ. ಇಡೀ ಕೃತಿ ಓದಿ ಮುಗಿಸಿದ ನಂತರ ಅದರ ವಿಸ್ತಾರಕ್ಕೆ, ನಿರ್ವಹಣೆಗೆ ಆಶ್ಚರ್ಯ ಹುಟ್ಟುವುದು ಸಹಜ. ಇದು ಆತನೊಬ್ಬನ ಕಥೆಯಲ್ಲ. ಪೂರ್ತಿ ಭಾರತದ ಚಿತ್ರಣ. ಭಾರತ ಹಾಗೂ ಪಾಕಿಸ್ತಾನದ ಸಂಬಂಧದ ಬಗೆಗಿನ ಸೂಕ್ಷ್ಮ ವಿಶ್ಲೇಷಣೆಯ ಹೂರಣವೂ ಇಲ್ಲಿರುವುದು ಗಮನಾರ್ಹ. ಮಹಾನ್ ವ್ಯಕ್ತಿಯೊಬ್ಬರ ಜೀವನ ಚರಿತ್ರೆಯಲ್ಲಿ ವಾಸ್ತವ ಸಂಗತಿಗಳನ್ನು ಹೇಳುವಾಗ ಎಲ್ಲ ಸಂಗತಿಗಳೂ ಆಸಕ್ತಿದಾಯಕ ಮತ್ತು ರೋಚಕವಾಗಿಯೇ ಇರಬೇಕೆಂಬ ನಿಯಮವಿಲ್ಲ. ಆದಾಗ್ಯೂ ಲೇಖಕರು ತಮ್ಮ ಸ್ವಾರಸ್ಯಕರ ಬರವಣಿಗೆಯ ಶೈಲಿಯಿಂದಾಗಿ ಕೃತಿಯ ಉದ್ದಕ್ಕೂ ಕುತೂಹಲ ಉಳಿಸಿಕೊಂಡು ಬರುವುದರ ಮೂಲಕನಿಜವಾದ ಮೋಹನದಾಸ್ ಗಾಂಧಿಯನ್ನು ಸಂಪೂರ್ಣವಾಗಿ ಓದುಗರಿಗೆ ಪರಿಚಯಿಸುತ್ತಾರೆ. ಜೀವನ ಚರಿತ್ರೆಯನ್ನು ಹಲವು ವಿಧಗಳಲ್ಲಿ ಓದಬಹುದು. ಇದನ್ನು ಒಂದು ಕಾದಂಬರಿಯಾಗಿ, ಪ್ರವಾಸ ಸಾಹಿತ್ಯದ ಕೃತಿಯಾಗಿ, ಸಾಹಸದ ಕಥೆಯಾಗಿ ಓದಬಹುದು.
ಡಾ.ರಾಗಂ ತಮ್ಮ ವಿದ್ವತ್ತಿಗೆ ಪ್ರಸಿದ್ಧರಾಗಿರುವಂತೆಯೇ ನಿರೂಪಣೆಯ ಸೊಗಸು, ಭಾಷೆಯ ಗಾಂಭೀರ್ಯ ಮತ್ತು ಸ್ಫುಟತ್ವಗಳಿಗೆ ಪ್ರಸಿದ್ಧರು. ವೈಚಾರಿಕ ಪ್ರಜ್ಞೆಯೊಂದಿಗೆ ವಾಸ್ತವಾಂಶಗಳಿಗೆ ಹೆಚ್ಚು ಒತ್ತು ನೀಡುತ್ತ ಗಂಭೀರವಾದ, ಸ್ಫುಟವಾದ, ಸಮತೂಕ ತೀರ್ಮಾನದ ಗದ್ಯ ಇವರದು. ಲೇಖಕರ ವ್ಯಾಪಕವಾದ ಅಧ್ಯಯನ, ಸಂಶೋಧನ ದೃಷ್ಟಿ, ಅರ್ಥಪೂರ್ಣವಾದ ವಿವೇಚನೆ, ಆಧಾರಸಹಿತವಾದ ಚರ್ಚೆ, ವಸ್ತುನಿಷ್ಠ ವಿಮರ್ಶೆ- ಇತ್ಯಾದಿಗಳಿಂದ ಪ್ರಸ್ತುತ ಕೃತಿ ಕನ್ನಡ ಸಾಹಿತ್ಯಕ್ಕೆ ನಿಸ್ಸಂದೇಹವಾಗಿಯೂ ಇದೊಂದು ವಿಶಿಷ್ಟವಾದ ಕೊಡುಗೆಯಾಗುವುದರಲ್ಲಿ ಸಂದೇಹವಿಲ್ಲ.
  -ಸಿ.ಎಸ್.ಭೀಮರಾಯ
ಆಂಗ್ಲ ಉಪನ್ಯಾಸಕರು             
 ‘ಅಪೂರ್ವ ನಿವಾಸ’,
ಯಮುನಾ ನಗರ, ಕುಸನೂರ ರಸ್ತೆ,
ಕಲಬುರಗಿ-585105
ಮೊ. ನಂ-9008438993/9741523806


No comments:

Post a Comment